Saturday, July 23, 2011



ಹಾಗೆ ಸುಮ್ಮನೆ  ನಿನ್ನ ಜತೆಯಲ್ಲಿ ಕೈ ಕೈ ಬೆಸೆದು ನಡೆದ 
ಆ ರಾತ್ರಿ , 
ನದಿ ದಂಡೆಯ ಬಂಡೆಗಳ ಸಂದು ಗೊಂದುಗಳ ನಡುವೆ 
ಸುಮ್ಮನೆ ತಲೆಯಿಟ್ಟು.....
 ತೀಡಿದ ನಿನ್ನ ಮುಂಗುರುಳ ತುದಿಯಲ್ಲಿ ,ಕಣ್ಣ ರೆಪ್ಪೆಗಳ ನವಿರಾಗಿ ಮುಚ್ಚಿ 
ಹಾಗೆ ಸುಮ್ಮನೆ ಒತ್ತಿದ ತುಟಿಗಳ ಗುರುತು .....
ಹರಿವೆ ನೀರ ಜುಳು ಜುಳು ಸದ್ದನು ಸುಮ್ಮಗೆ ಆಲಿಸಿ ,
ನೀರ ಅಲೆಯಲ್ಲಿ ತಲೆಯಿಟ್ಟು ...
ಹಾಗೆ ಸುಮ್ಮನೆ ಬಿಗಿದಪ್ಪಿದ ಮನಸಿಗೆ ....
ನೀಲಾಕಾಶವ ನೊಡುತ್ತ ....ಮಿನುಗೋ ನಕ್ಷತ್ರಗಳ ಪೋಣಿಸಿ 
ಹಾಗೆ ಸುಮ್ಮನೆ ಜೋಡಿಸಿಟ್ಟ ನನ್ನ ನಿನ್ನಯ ಹೆಸರು ....
ಚದುರಿದ ನಕ್ಷತ್ರಗಳನೆಲ್ಲ ಕೂಡಿಸಿ ,ಹಾಗೆ ಸುಮ್ಮನೆ 
ಕಟ್ಟಿಕೊಂಡ ಪುಟ್ಟ ನನ್ನ ನಿನ್ನಯ ಗೂಡು ...
ಎಲ್ಲ ಬಂದು ನಿನ್ನ ನೆನಪನ್ನು  ಇರ ಹೇಳುತ್ತಿವೆ ...
ಹಾಗೇ ಸುಮ್ಮನೆ ....


3 comments:

  1. ಹೇಯ್.....
    its supper......
    ತುಂಬಾ ಚನ್ನಾಗಿದೆ.....
    ಅಕ್ಷರಗಳನ್ನು ತುಂಬಾ ಚನ್ನಾಗಿ ಪೋಣಿಸಿದ್ದೀರಾ.....

    3 ಬಾರಿ ಓದಿದೆ.... ಖುಷಿಯ ಮೇಲೆ ಖುಷಿ....

    ReplyDelete