Thursday, October 3, 2013



ಕೊನೆಗೂ ಹೆತ್ತ ನೆಲದಿಂದ ದೂರಾದದ್ದು 
ಗೊತ್ತಾಗಲೇ ಇಲ್ಲ ..
ಅಜ್ಜ ಮುತ್ತಜ್ಜ ಮಾಡಿ ಕೂಡಿಟ್ಟದ್ದು ..
ಉತ್ತಿ, ಬಿತ್ತಿ ಕಾಪಿಟ್ಟ ನೆಲವೀಗ 
ಯಾರೂ ಓಡಾಡದೆ ಹಸಿರಾಗಿದೆ ...
ಅಜ್ಜನಿಗೊಂದು ಚಟವಿತ್ತು ..ಹೋದ ದಾರಿಯಲ್ಲೇ 
ಕೂತು ಕಳೆ  ಕಿತ್ತು ಚೊಕ್ಕವಾಗಿಡುವುದು 
ತೋಟದಲ್ಲಿ ಕಳೆ ಇದ್ದರೆ  ಸತ್ವ  ಇರುವುದಿಲ್ಲ ..
ಕಾಲ ನಿಲ್ಲಬೇಕಲ್ಲ ..ಹೊಸ ಹೊಸ ಕ್ರಾಂತಿಗಳು 
ಮೊದಲೆಲ್ಲ ಕೃಷಿ ಆಗಿದ್ದು ಮಾಡುವವರಿಲ್ಲದೆ 
ಸಹಜ ಕೃಷಿ ಆಗಿದ್ದು ..
ಕೃಷಿ ಬಿಟ್ಟವ ಸಹಜ ಕೃಷಿಕ ..
ಬಿಟ್ಟು ಬಿಡಿ ಅವಷ್ಟಕ್ಕೆ ..ಸಹಜವಾಗಿ ಬೆಳೆಯಲಿ ..
ತೋಟವೆಂದರೆ ಕಳೆಯಿರಬೇಕು ,ಹಸಿರಿರಬೇಕು ..
ಕೃಷಿಯೇ ಗೊತ್ತಿರದ ಗಮಾರನಿಗೆ ನೋಡಿದ್ದೆಲ್ಲ ಚಂದ 
ಅರೆ ಅದೆಷ್ಟು ಹಸಿರಾಗಿದೆ ಎಂದು ಕಟ್ಟಿದ 
ಬಿಂಜಲು ಗಳನ್ನೆಲ್ಲ ಸರಿಸಿ ಓಡಾಡಿದ 
ಮೇಲೆ ಕುಳಿತ ಆಜ್ಜ ಮುತ್ತಜ್ಜರ ಕೂಗು ಅಲ್ಲಿಂದಲೇ ..
ಮಗನೆ ಬಿನ್ಜಲು ಕಟ್ಟುವುದು ಪಾಳು  ಬಿದ್ದ ಜಾಗದಲ್ಲಿ ..
ಸಹಜ ಕೃಷಿ ಯಲಲ್ಲ ..